Narabali
Da Ra Bendre · 1896–1981 · from the Kannada original
Original
೧ಬಲಗಾಲಲಿ ಬಿಡುಗಡೆಯನು ಮೆಟ್ಟಿ-ನಿಂತಿಹೆ ಎಲೆ ಕಾಳಿ |ನಿನ್ನೆಡಗಾಲನು ಸೆಕ್ಕುತಲಿಹುದು-ಶ್ವಾನ ಸೂಕರಾಳಿ |ಭಯದಾಯಕ ಬಲಗೈಯನು. ಚಾಚಿಹೆಶಾಪವ ಕೊಡಲೆಡಗೈಯನು ಎತ್ತಿಹೆ ಎಲೆಲೆ ರುದ್ರಕಾಳಿ !ಮುಂದೆ ಬೀಸಿ ದುಃಶಾಸನ ಪಾಶವಹಿಂದಿರಿಸಿಹೆ ದುರ್ಯೋಧನಾಂಕುಶವ ಅಹಹ ಮಹಾಕಾಳಿ !ಮುಸುಕಿತು ಮುಸುಕಿತು ಮುಸುಕಿತು ನೋಡೇನಿನ್ನ ಹೊಟ್ಟೆಯುರಿಂದಲೆದ್ದ ಹೊಗೆಯಿಂದ ನಿನ್ನ ಮೈಯು !ಎಸೆವುದು ಎಸೆವುದು ಎಸೆವುದು ನೋಡೇದಿಗಿಲುಗೊಳಿಸಿ ಭುಗಿಲೆಂದು ಎದ್ದ ಮೊಗದಲ್ಲಿ ಬಿಸಿಲ ಬೇಗೆ !ಎದ್ದೆ ಎದ್ದೆ ನೀನಿದ್ದೆ !ಜೀವ ತಿನ್ನುವಾ ಹಸಿವೆ ಮತ್ತೆ ನೆತ್ತರ ನೀರಡಿಕೆಮೈಯ ತಾಳಿ ನೆಲದೆದೆಯ ಸೀಳಿಎದ್ದಂತೆ ಪ್ರಳಯಕಾಳಿ !ನಾಳಿನ ಬಲಿಗಳ ಗೋಳನು ಊಹಿಸೆನಿನ್ನ ನಿನ್ನ ಆ ಉದ್ದ ಕಿವಿಗಳೂ ತಾವೇ ಬತ್ತಿದವು !ಮುಂದಿನ ಸಾವಿನ ಗೊಂದಲ ಕಲ್ಪಿಸಿನಿನ್ನ ನಿನ್ನ ಆ ಬಿರಿಗಣ್ಣುಗಳನು ನೀನೆ ಕಿತ್ತುಕೊಂಡೆ !ಆರುವೆ ಎಂದು ? ಎಂದು ಆರುವೆ ?ನೆಲದಗಲಕೆ ಮುಗಿಲುದ್ದಕೆ ಹೊತ್ತಿಹ ಎಲೆಲೆ ಬಂಜೆ ಬೆಂಕಿ !ಪ್ರಳಯಕಾಳಿ ಏ ರುದ್ರಕಾಳಿ ಎಲೆ ಎಲೆಲೆ ಮಹಾಂಕಾಳಿ !
Translation
IO’ Kali, standing tall; having trampled our freedom under your right foot !Licking at your left leg - are the dogs & pigs !Raised is your right hand fearsomely !O’ Rudrakali, your left hand; aloft and ready to curse !Hurling forward the noose of deceiptAnd controlling people with an iron fist, O’ MahakaliCasting a veil of fear all over !Causing a cloud of jealousy in the entire Universe !Infusing mistrust in the minds of people !Frightening people with your ferociously glistening face !Appearing so, suddenly within their midst !Displaying a hunger for human flesh & a thirst for blood !Morphing in your fiercest form,emerging from within the bowels of earth, O’ Pralaykali !Making your prey shudder in fearCausing your ears to sharpen up !Anticipating the confusion in the minds of your preyCausing your eyes to pop out of their sockets !When will you calm down?When? will you get satiated?When will you extinguish the unfettered fires that have been lit?O’ Pralaykali, O’ Rudrakali, O’ Mahakali ! When?
Original
೨ನಿಂದಿಹರಿದೊ ಇಗೊ |ಎಕ್ಕಡ ಮೆಟ್ಟಿಹ ಎಕ್ಕಲ ಬಂಟರುಉಕ್ಕಡ ಗಾತ್ರದ ಉಕ್ಕಡದವರುಕಕ್ಕಡ ಹೊತ್ತಿಸಿ ಕಣ್ಣುಗಳಲ್ಲಿಮಾಡಿಸೆ ಕೆನ್ನೀರ್ ಜಳಕವಸುಏರಿಸಿ ರುಂಡದ ಹೂವುಗಳಹಾಕಲು ಮದ್ದಿನ ಧೂಪವನುಬಾರಿಸೆ ಗುಂಡಿನ ಗಂಟೆಗಳಬಂದಿತು ಬಂದಿತು ನೈವೇದ್ಯನೀತಿಯ ಭೂತವೆ ಹೊಡಡಿಲ್ಲಿಂದದಯಯ ಡೆವ್ವವೆ ನೀ ಹೊರಡುಕರುಳಿನ ಮರುಳೇ ಓಡಿಲ್ಲಿಂದನ್ಯಾಯರಾಕ್ಷಸನೆ ನೀನೋಡುಬಲಗಾಲ್ ಬುಡದಿಂ ಬಿಡುಗಡೆ ಬಿಡಿಸಲುನರಬಲಿಯೇ ಬೇಕು !ಇದುವೆ ಕಾಳಿಯ ಪೂಜೆಯು ಶುದ್ದ !ಇದಕ್ಕೆ ಹುಂಬರು ಎಂಬರು ಯುದ್ಧ !
Translation
IIWhat do I wish to see here !Gigantic priests wearing footwear in the sanctum sanctorumHuge hangmen carrying strong noose with themWorshipping Her with burning eyesDrenching & bathing her with bloodOffering her decapitated headsBurning gunpowder as incenseFiring gunshots in lieu of bellsGetting ready this to satiate HerKeeping aside all moralityPushing away all empathyForcing out all tenderness from heartsTaking out all feelings of justice from minds; forIn order to free the shackles binding Her feetHuman sacrifice is a must !This is the right & purest form of worshipping Ma KaliThis worship is nothing but war !
Original
೩ಮುಪ್ಪಿನ ತಾಯ್ಗಳೆ, ಹೊಟ್ಟೆಯ ಡೊಳ್ಳಮುದಿ ತಂದೆಗಳೇ, ಕೈ ಕೈ ತಾಳಬಡೆಯಿರಿ ಬಾರಿಸಿರಿ !ಚಿಕ್ಕ ಮಕ್ಕಳೇ, ಚೀರು ಸನಾದಿಯಅಕ್ಕ ತಂಗಿಯರೆ, ಅಳಿಲಿನ ಕೊಳಲಊದಿರಿ, ಉಸಿರಿಸಿರಿ |ಮಂಡೆ ಮೋಚಿದಾ ಹೆಂಡಿರ ದಂಡೇವಿವಿಧಾಲಾಪ ಪ್ರಚಂಡ ಪ್ರಲಾಪದಓಲಗ ಬಾಜಿಸಿರಿ !ಬೊಬ್ಬೆಯ ಕುಟ್ಟಲೆ ಕರುಣಿಗಳರಸೇ !ಮಾನವನೆಂಬಾ ನಿನ್ನೀ ಕುನ್ನಿಯು ಮಾಡಿದ ಮಾಟಕ್ಕೆಇಂತಹ ಪಾಪಿಯ ಲೋಭಿಯ ಕೋಪಿಯ ಹುಟ್ಟಿಸಿದೇತಕ್ಕೆ !
Translation
IIIO’ old mothers, treat your empty stomach as drumsO’ old fathers, use your hands as cymbalsBeat them, clang them !O’ children, screech out aloudO’ sisters, wail your hearts outTill your voices reach everyone !O’ gangs of widowed womenCarrying anguish within your heartsLet it be known to all !O’ benevolent one, scream aloud, make a hue and cry !Seeing the state that Your own cubs have been reduced to !Rueing that You gave birth to such wretched ones !
Original
೪“ಮುಕ್ಕಣ್ಣನ ಆ ಮೂರೂ ಕಣ್ಣುಗಳುಕುರುಡೇ ಕುರುಡೇ?ಭೂ-ಶ್ರೀಪತಿಯಾ ನಾಲ್ಕೂ ಕೈಗಳುಮೊಂಡೇ ಮೊಂಡೇ |ವೇದವುಸಿರಿದನ ನಾಲ್ಕೂ ಮುಖಗಳುಮೂಕೇ ಮೂಕೇ?ಅಮರರೆಂಬುವರು ಕೊಳೆಯದ ಹೆಣಗಳೊ ?ಮುಚ್ಚದ ಕಣ್ಗಳು ಮುಚ್ಚಿದ ಕಣ್ಗಳೊ?''ಏನಿದು ಏನಿದು ಏನನ್ಯಾಯ ?ಶಾಂತಂ ಪಾಪಂ ಒಳಿತೋ ಒಳಿತುದೇವಿಯ ಪೂಜೆಗೆ ಹೆಸರಿಡಬೇಕೇ ?ಇಂತಹದೆಂದದು ತಾ ಕೆಡಬೇಕೇ?ನೆತ್ತರಹೇಡಿಯೆ, ಮುಚ್ಚೆಲೆ ಬಾಯ !ಬಲಗಾಲ್ ಬುಡದಿಂ ಬಿಡುಗಡೆ ಬಿಡಿಸಲುನರಬಲಿಯೇ ಬೇಕು !ಇದುವೇ ಕಾಳಿಯ ಪೂಜೆಯು ಶುದ್ಧ !ಇದಕ್ಕೆ ಹುಂಬರು ಎಂಬರು ಯುದ್ಧ !
Translation
IV“Have all eyes of the Three-Eyed One gone blind ?Has the strength of the Four- Armed Bhoo & Shripathy ebbed ?Has the most knowledgable Four- Faced One, who spouted the four Vedas, gone mute ?Have the immortal Ones become nothing more than undecayed corpses ?Have the Omniscient Ones closed Their eyes ?”How much injustice do we have to see ?How long can we keep quiet ?How long can we stay patient ?How can you question this worship of Mahakali ?How can you remain so pacifistic ?All those who are so afraid of spilling blood; shut your mouth;for In order to free the shackles binding Her feetHuman sacrifice is a must !This is the right & purest form of worshipping Ma KaliThis worship is nothing but war !
Original
೫ಬಲವೆಂಬುದು ಇದು ಬೆವರಿನ ಬಳ್ಳಿಕಾಳಗವೆಂಬುದು ನೆತ್ತರ ಹೂವುಬಿಡುಗಡೆಯೆಂಬುದು ಸಾವಿನ ಹಣ್ಣುಇನ್ನೂ ಇನ್ನೂ ಇನ್ನೂ ಇನ್ನೂಪಂಚಮರಾದಿ$ ಪಂಚವರ್ಣವೇಪುಟಿಸು ಪಾಂಚಜನ್ಯ !ಭೂಮಿತಾಯಿಯೇ ಜ್ವಾಲಾಮುಖದಿಂದೂದು ಶಂಖವನ್ನುನಿಲ್ಲಲಿ ನಟರಾಜನ ನಾಟ್ಯಭಂಗಪಡೆಯಲಿ ಬ್ರಹ್ಮಸಮಾಧಿಹೋಗಲಿ ಹಾಲಿನ ಕಡಲಲಿ ಮಲಗಿದದೇವನ ನಿದ್ದೆಯು ಹಾಳಾಗಿ !ನೋಡಲಿ ನೋಡಲಿ ನೋಡಲಿ ಅವರು.ಮೂವರು ಕೂಡಿ, ರಚಿಸಿದ ಮೂರಾಬಟ್ಟೆಯ ನಾಟಕವ !ಬಲಗಾಲ್ ಬುಡದಿಂ ಬಿಡುಗಡೆ ಬಿಡಿಸಲುನರಬಲಿಯೇ ಬೇಕು |!ಇದುವೇ ಕಾಳಿಯ ಪೂಜೆಯು ಶುದ್ಧ !ಇದಕ್ಕೆ ಹುಂಬರು ಎಂಬರು ಯುದ್ದ !
Translation
VGrow your strength like you would a creeper in your homeBloodshed is the resulting flower that you get from thatYour ultimate sacrifice is the fruits of all your effortsThe war demands more & more such oblationsFrom each & every one,irrespective of their caste or creedCome forward all; signalling your intentScorch Mother Earth forcing her to blow Her conch screechingly loudForcing Nataraja’s cosmic dance to come to a stopInfringing Brahma’s meditation while seated on his lotus seatAwakening Vishnu’s deep slumber in His abode amidst the white seas !Let them open Their eyes & watchHow the Universe that They created is splitting asunder; forIn order to free the shackles binding Her feetHuman sacrifice is a must !This is the right & purest form of worshipping Ma KaliThis worship is nothing but war !
Original
೬“ ಏನಿದು ಏನಿದು ಏನಿದು ” ಎಂದುದೇವರ ಜಂಗುಳಿ ಕಿರಿಚುವದೇಕೆ ?ಇದು ಮಾನವತೆಯು ಮೊಳಗುವ ಕಾಲ |ನಾಗರಿಕತೆಯೂ ಬೆಳಗುವ ಕಾಲ |ಕ್ರೈಸ್ತನ ಬೋಧೆಯು ಉಬ್ಬಿಹ ಕಾಲಬಿಳಿಛಾಯೆಯು ತಾ ಹಬ್ಬಿಹ ಕಾಲ !ಜೀವದಯಾ ಸಂಘದ ಸುಳಿಗಾಲ | [ಹಿಂಸೆಯ ಕ್ರೌರ್ಯಕೆ ಇದು ಅಳಿಗಾಲ !ಶಾಂತಿಪುರಾಣವ ಹೇಳುವ ಕಾಲ |!ಬುದ್ಧಚರಿತೆಯನು ಕೇಳುವ ಕಾಲ !ಕೋಳಿಯ ಕೊಯ್ದರೆ ಕೆರಳುವರುಂಟುಕುರಿಯನು ಕೊಂದರೆ ಕೇಳುವರುಂಟುಕೋಣನ ಕಡಿದರೆ ಕಾಯುವರುಂಟುಗುಬ್ಬಿ ಮಾನವನ,ಕೊಯ್ದರು, ಕೊಂದರು, ಕಡಿದರು ಏನು ?ಕೊಂದನು ಆತನು ತನ್ನನೆ ತಾನುಸ್ವಾರ್ಥತ್ಯಾಗವಿದಾತ್ಮ। ಹುತಿಯಿದುನಕಬಲಿ ನರಮೇಧವು ಕೇಳುಅಶ್ವಮೇಧಕೂ ಸರಿಮೇಲುಇದುವೆ ಕಾಳಿಯ ಪೂಜೆಯು ಶುದ್ದ !ಇದಕ್ಕೆ ಹುಂಬರು ಎಂಬರು ಯುದ್ಧ !
Translation
VIO’ all Gods in Heaven, why are you screeching & screamingAt what is happening here…don’t you really know?This is humanity going through a turbulence !This is civilisation getting a makeover !This is the period of the rising of Jesus Christ’s followersThis is the era of the white colonialists spreading all over !This is the period of Christian philosophy dominating in the worldThis is the period of cruelty ruling the worldNow is when all we can do; is listen to the sermons of peace & love !Now is when all we can do; is to follow the path of The Buddha !Now is when the killing of a chicken has consequences,Now is when the slaughtering of a lamb has consequencesNow is when the beheading of a cow has consequencesBut, the poor man; the poor IndianWhat does it matter if he is killed,slaughtered, beheaded ?Hasn’t he attained the highest levels through the self-sacrifice of his mind, body & soul ?To counter the mindless culling & slaughtering of India’s soulHuman sacrifice is a must !This is the right & purest form of worshipping Ma KaliThis worship is nothing but war !
Did this poetry & its translation speak to you?
Excerpt — opening stanza of the original. Full translation to follow.
← All translations