Holasu
Da Ra Bendre · 1896–1981 · from the Kannada original
Original
೧ರತಿ ರಂಡೆಯಾದಳೆಂದಿತೊಂದೇ ಬೊಬ್ಬೆ!ಶಿವನ ಕಣ್ಣೊಳಗಿತ್ತು ರುದ್ರರೌದ್ರದ ಕೆಚ್ಚುಕಾಮ ಪೌರೋಹಿತ್ಯಕ್ಕಿನ್ನು ಬೆಂಕಿಯ ಹಚ್ಚು!ಓ ಯಕ್ಷಿ! ಹೈಮವತಿ! ಏನಾಯಿತೆ ಅಬ್ಬೆ?
Translation
OneWas the lament only because Rati became a widow!Shiva’s eyes, emanating terror & heat a-la Rudra-RaudraThe rites of fire conducted by KamaO Yakshi! O Parvati! What happened O Mother?
Original
೨ಸುಕುಮಾರ ಸಂಭೂತಿಗಾಗಿ ಧೋ-ಧಬಧಬ್ಬೆ!ದೇವ ವಿಜಯ ಮಯೂರ ಹಾಕುತ್ತಲಿದೆ ಕೇಕೆ!ಅಸುರದಲ್ಲಣನಾದ ಬಾಯಿಬಿಡುತಿದೆ ಮೇಕೆ,ಶಿವ ವೀರ್ಯದೀ ಪಿಂಡ, ಕಾಡು ಕಾಮನಕಬ್ಬೆ?
Translation
TwoYearning for the birth of His brave sonSo were the Gods - impatient & ferventHaving meekly surrendered to the atrocities of AsuraAwaiting the fruit of Shiva’s seed – aided by Kama’s bow
Original
೩ಚೈತ್ರ ರಥದಲಿ ವಸಂತನ ಬರವು ಎಂದಿಗೂಮಾಂದಳಿರು ತೋರಣದ ಮುಂದೆ ಮಾಮಿಡಿ ಗುಡಿಯುಚಂದಿರಗು ಶುಕಪಿಕಗು ಮಾಗಧಗು ಬಂದಿಗೂಕಾಮದ ಅನಿವಾರ್ಯ ಪ್ರೇಮ, ಧ್ವನಿಸುವ ನುಡಿಯು
Translation
ThreeThe grand arrival of Vasantha in the chariot of ChaitraBedecked with garland of mango leaves & its fruitHandsome & radiant, Kamadeva - riding his parrot;Awakening love & desire silently - arousing passions
Original
೪‘ಹುಲಿಗೆ ಹುಲಿಗ್ಯೊ!’ ಕೂಗು ತೇಗು ಗೊಬ್ಬರ ಹುಲಸುಹೊಲ ಸೀಮೆಗಂಡು ಹನ್ನೆರಡು ತಿಂಗಳ ಹೊಲಸು
Translation
FourHowling & bawling – amidst his crops; smeared in dungFire burning – dispelling darkness & muck – cleansing
Did this poetry & its translation speak to you?
