Dashavatara
Da Ra Bendre · 1896–1981 · from the Kannada original
Original
ಮತ್ಸ್ಯ ಅವತಾರ೧ಆ ಕಲ್ಪಾ ಪ್ರಳಯಾ ಬಂತು ನೀರೇ ನೀರು !*ಶತರೂಪಾ ಮನು ಧ್ರುವ ಆಚೆಉತ್ತಮಾ ಈಚ.೨ಕ್ಷರಾ ಅಕ್ಷರಾ ಅವ್ಯಯದಾಟಾಅದು ಸುಮೇರು ಕೂಟಾಆಯಿತು ದುರ್ವಾಸಾ ಕೋಪಾಮುಗೀಬೇಕು ಶಾಪಾ.೩**ಹಯಗ್ರೀವಾ, ಆಚೀನ ವೇದಾಈಚಿಗೆ ತಂದೇ, ನಿನಗೆ ವಂದೇ ವಂದೇ !ಹಿಮಾಲಯಾ ಸಮೀಚೀನಾ ಮಾನದಂಡಾ ಒಂದೇ.
Translation
Matsya Avatara1It seemed like The Final Deluge, water all overSaving mankind through Shatarupa & ManuPulling them to safety ashore2Profound & profane, Eternal & mutableThus was the battle around Mount SumeruManifesting & mutating in your myriad formsTo balance life on earth; cool Durvasa’s wrath3Saving the Vedas, disclosing them to mankindKilling Hayagreeva, you enlightened the worldObeisance to you; for delivering justice allover
Original
ಕೂರ್ಮ ಅವತಾರರಾಹೂ ಕೇತೂ ಶೇಷನಾಗಿಸರ್ಪಣವಾಗಿ ಸೀಸಾಗಿಹತ್ತರ ಏರಿಳಿವಾಟ ಪ್ರಾಣವಾಗಿಸಾಯೋದನ ಬದುಕಿ ಇತ್ತುಬದಕೋದನ ಸಾಯತಿತ್ತುಕೊಡೋ ಕೊಳ್ಳೋ ಜೀವಾನ ದಾನವಾಗಿ.೧ಹದಿನಾಲ್ಕೂ ರತ್ನಗಳೂಹಂಚಿಹೋದವು ಎತ್ತೆತ್ತೋವಿಷಾ, ಅಮೃತಾ ಎರಡೇ ಉಳಿದವು ಪಾನವಾಗಿಕಚ್ಛಪನ ಬೆನ್ನಮ್ಯಾಲೆನಿಂತದ ಜೀವಲೋಕಮಾನವನಾಗಿ, ದಾನವಾಗಿ, ದೇವನಾಗಿ!
Translation
Kurma Avatara1Rahu & Ketu; mutated as serpentsZig-zagging across heavensIntersecting the paths of Sun & MoonBecoming their bitter enemiesOne, a head without the bodyOther, a headless tailDevouring & regurgitating them; an endless cycle2All the fourteen Ratnas emergedAnd got distributed among allAll that remained were just the Vish & AmritBalanced on the back of the Kurma (Turtle)Was the future of mankind in the UniverseDelivered as His blessing, his forbearance
Original
ವರಾಹ ಅವತಾರ೧ಪಾತಾಳಾ ಕಂಡಳೋಭೂಮಿ ಏನುಂಡಳೋಭೂವರಾಹಾ-ಮೂರನೇ ಅವತಾರಧರೆಗೆ ಆತು ಆಧಾರಾ.೨ಇವನ ಧ್ವಜಾ, ಸೃಷ್ಟಿಗೆ ಬೀಜಾಅಮೃತ ರಾಜಾಎತ್ತಿದಾ ಕ್ವಾರಿಯ ಮ್ಯಾಲೆಆದಾ ಮೂಸಲಂಭಾನೆಲೆನಿಂತ ನೀ ಜಗದಂಬಾ !
Translation
Varaha Avatara1Hid in the deepest recess of the Cosmic SeaThus was Bhudevi made to sufferTill Bhu-Varaha in His Third AvatarBrought & restored Her back2His manifestation being responsibleTo create & nurture the seeds of lifeBy lifting You between His tusksAnd placing on Your axis & in Your orbitLetting You survive & sustain, O Jagadamba !
Original
ನರಸಿಂಹ ಅವತಾರನರಸಿಂಹ ಭೂಪಾ | ತ್ರಿಲೋಕೈಕ ದೀಪಾ || ಪಲ್ಲವಿ ||೧ಫುಡೂಫುಡೂಘಡೂ ಗುಡುಗಲ್ಲಾಭೂಮಿಯಾ ನಡುಗೂ !೨ಇದೀಗ ಇದ್ದಾ-ಈಗ ಇಲ್ಲದಾದಾಹಿರಣ್ಯಕಶ್ಯಪಾ, ನೆಲದೊಳಗ ಅಡಗಿದಾ.೩ಪ್ರಹ್ಲಾದ ಭಕ್ತಿ ತಿಳಿದಾರವಿರೋಚನಾ, ಬಲೀ, ಬಾಣಾ,ಶಂಕರನಾಗಿ ಉಳಿದಾ.
Translation
Narasimha AvataraNarasimha, the King of KingsThe Light of the Universe1GhuDuGhuDu – the mighty sound of thunderMakes the Earth shiver2Appearing and vanishing at willTerrifying Hiranyakashyapa3Prahlada recognised His divinityVirochana, Bali, Bana didntAnd ruled the world with compassion
Original
ವಾಮನ ಅವತಾರ೧ಮನದೊಳಗ ಮನೀ ವಾಮನೀ ತೇಜಾಅಣುಮಹತ್ತಾದಾ ಓಜಾ |ಬೇಡಿದವರಿಗೆ ಬೇಡಿದ್ದ ಕೊಡಾಂವಾಬಲೀ ಆಗಲಿಲ್ಲಾ ಬಡವಾ೨ಬಲಿದ್ವಾರಾ ಕಾಯತಾರಾ ಹರಿ ಹರಾನಾಳೇ ಬಲೀ ಇಂದ್ರನ ಅವತಾರಾವರದಾ ಯಾರಂತಾರ ಬಲಿನ್ನ ಮುರದಾವಾಮನಾ ಮೂರೂ ಲೋಕಾ ಹಿರದಾ.
Translation
Vamana Avatara1There He appeared at his home; The VamanaRadiating exceptional brilliance & IntelligenceBali, the unparalleled giver of almsLost his all; yet did not lose anything2Such is his generosity; Hari & Hara wait on himBali who gained fame as an avatar of IndraCan anyone say that his boons became a baneThough the 3 worlds became Vamana’s gain
Original
ಪರಶುರಾಮ ಅವತಾರಕೃತ್ಯಾ ಮಾಟಾ ಮಾಡತಾರಾ ಮಾಡಸ್ತಾರಾ ದಗಾಬುದ್ದಿ ಇದ್ದವರಿಗೂ ಹುಚ್ಚು ಹಿಡಸ್ತಾರಾಹೈ ಹೈ ಭೂತಾ, ನಮ್ಮ ಕೈಯಾಗೈತೀ ಭವಿಷ್ಯಾ !ಇತ್ತ ಶಾಪಾ, ಅತ್ತ ಚಾಪಾ, ಉಳೀಲಿಲ್ಲ ಪಾಪಾಇದು ವರಾ, ಅಲ್ಲಾ ಕೋಪಾಕೂಡಲೀ ಹಿಡಿದಾ; ತಾಯಿ ತಲೀ ಕಡದಾಮತ್ತ ಮಾತೃಭಕ್ತನಾಗಿ ಉಳಿದಾ !
Translation
Parashurama Avatara1Sorcery, witch-craft, black magicA way of life – causing turmoil in best of mindsHey hey Bhoota, our destiny is in our hands !2The curse, the asceticism – led to confusionWas it a boon? Or a rage?He held the axe; and cut the mother’s headAnd yet retained mothers’ love perennially
Original
ರಾಮ ಅವತಾರ೧ದಶರಥಾ ಕೈಮುಗಿದಾ, ರಾವಣಾ ಲಾಗಾ ಒಗದಾಹನುಮಂತಾ ಸಾಗರಾ ಜಿಗದಾ.೨ಸೀತಾ ಬೆಂಕಿಗಾಗಲಿಲ್ಲಾ ಬೂದಿಭೂಮಾ ವಿಭೂತಿ, ಸತಿಯಾ ಹಾದಿ !೩ಭರತಾ, ಭಪ್ಪರೇ ಮಗನೋ, ನಿನ್ನಂಥಾವಾ ಸಿಗನೋರಾಮಾಯಣಾ ಗೋಗೋಲಗಗನೋ !೪ರಾಮಾ ಆತ್ಮಾರಾಮಾ ಶಿವರಾಮಾನೀ ಬದುಕಿದ್ದದ್ದೇ ಹೆಚ್ಚು ಪೂರ್ಣಕಾಮಾ !
Translation
Rama Avatara1Dasharatha bowed with folded handsRavana died at his handsHanumanta crossed the oceans for him2Sita did not burn to ashes and becomeA Vibhuti in her journey of being a Sati !3Bharata, the unparalleled son – unique oneSteeped in devotion of the elder one4Rama – Shiva’s chosen oneYour entire life is a lesson for everyone
Original
ಕೃಷ್ಣ ಅವತಾರ೧ಗೋವಿನ ಕೂಡ, ಗೋಪಾಗೋಪೀ ನೋಡು ನೋಡಮೂಢ ಮುಕ್ತಿಗೇ ಮೂಡ್ಯಾವ ಕೋಡ೨ಕೊಳಲೂ ರಾಧಾ ವೃಂದಾವನಾ ಯಮುನಾವೈಭವಾ, ಭವಶಮನಾ೩ಗೀತಾ ಮಾಡೋದದ ಕೃತಾರ್ಥಇನ್ನೂ ಸತ್ತಿಲ್ಲಾ ಪಾರ್ಥಾ
Translation
Krishna Avatara1Seeing you at your cows’ side - inspiresInnocent devotion within the Gopa-Gopis2Your flute causing a soothing tranquil effectOn Radha Vrindavana & Yamuna3The quintessential Partha in all of usIs the reason for Your Gita to be eternal
Original
ಬುದ್ಧ ಅವತಾರ — ವಿಠ್ಠಲ೧ವಿಸರ್ಗಾ ಸ್ಥಿತಿ ಲಯಾ, ಇಲ್ಲದಲ್ಲೇ ಉದಯಾಕಲ್ಲಾಗೀ ನಿಂತೆ, ಅಪಾರ ದಯಾ.೨ಕ್ಷೇತ್ರಜ್ಞಾ! ಎರಡೇ ಕೈಯಾಂವಾಆದವಾ, ಯಾದವಾ, ಸಪ್ತಭಕ್ತಿಧವಾ.೩ಕನ್ನಡಾ, ಮರಾಠಿ, ತೆಲುಗಾ ಎಲ್ಲೆಲ್ಲೂ ಅಲಗಾಸೋಲಿಗಾ ಸೋಲಗಾ.೪ಚಂದ್ರಭಾಗಾ ಕೊಟ್ಟಾಳ ಪುಂಡರೀಕಗ ಜಾಗಾಕಲೀಯ ಭೋಗಾ ಭಾಗಾ.
Translation
Buddha Avatara - Vitthala1Being sent away; yet You remainedEternally there as stone – Bestowing2Immortalising the place! O’ Two-Handed OneIn whose devotion was Chaitanya immersed for 7 days3Innumerable songs in Kannada Marathi TeluguInspiring devotion lost in their rhythm4At the banks of the Chandrabhaga, her watersShowed Pundarika find his existence, his life
Original
ಕಲ್ಕಿ ಅವತಾರಬಂದಾ ದೊರೀ ಕುದುರಿ ಏರಿ ಬಂದಾಹುಟ್ಟಿದಾಗಳೇ ಹಡದಾಕಿನ್ನ ಬಿಟ್ಟು ಬಂದಾಯಶೋದಾಗ ತಾಯಿ ಅಂದಾ !೧ಶ್ರೀ ಹೋಗಿ ಆದಾ ಇತಾ ಬಡವಾಹೋಟ್ಟಿಯೊಳಗ ಹೋತ್ತಿತೋ ವಡವಾಈಗ ಮುಹೂರ್ತಾ ಬಂದದ ಒದಗಿಅಂತಾನ ಮಾಡ ಮದವೀ೨ಭೂಮಿ ಮ್ಯಾಲೆ ತುಳಸೀ ಒಬ್ಬಾಕೀ ನನ್ನ ಸಮಾಸುಮಾರಾಗಿ ಇರಾವ ಆ ಸುಮಾ ಈ ಸುಮಾನನ್ನ ಪ್ರೇಮಾ, ಆಕಾಶದ ಕುಸುಮಾ ಇದು ಅಲ್ಲಾ ಭ್ರಮಾ೩ಇಲ್ಲಿ ಶೇಷಾ ಇದ್ವಾ; ಅಂಜನೀ ಕಟ್ಟಿದಳೋ ಜಿದ್ದಾವೈಕುಂಠದಿಂದ ತಿರುಮಲೆ ಮ್ಯಾಲೆಕಡಕೊಂಡು ಬಿದ್ದಾಇವಾ ಸಬಲಾ ದಶದಿಶಾ ಶುದ್ಧಾ.
Translation
Kalki Avatara1Here arrives the King, on his white steedLeft his mother as soon as he was bornAnd calls Yashoda as his maternal one2Became desolate & poor after She left himSuffering from pangs of her desertionHe now deems the timing to be just rightFor him to get hitched and regain his might3Tulasi is my chosen one – the only oneEqual and unparalleled – as no oneMy true love – real and not an illusion4Here resided Shesha on the seven peaksHere came He from VaikunthaTo Tirumala in search of his beloved OneHe – the omnipotent & omnipresent One
Did this poetry & its translation speak to you?
The Kannada original is shown as the poet's handwritten manuscript page alongside this translation.
← All translations