Merely wearing Rudraksh, holy ash & saying Mantra

Somanna · 12th century · from the Kannada original

Original

ವಿಭೂತಿ ರುದ್ರಾಕ್ಷಿಯ ಧರಿಸಿ ಷಡಕ್ಷರಿಯಂ ಜಪಿಸಿಗುರು ಲಿಂಗ ಜಂಗಮದ ಆದ್ಯಂತವನರಿಯದೆಏನೆಂದು ಪೂಜಿಸುವಿರಿ, ಆರಾಧಿಸುವಿರಿ?ಅದೆಂತೆಂದಡೆ:

Translation

Merely wearing Rudraksh, holy ash & saying MantraNot understanding the philosophy of Guru & LingaWhat do you gain from praying? From revering?When someone asks such, tell them

Original

ನೆಲದ ಮೇಲಣ ಶಿಲೆಯ ಕಲ್ಲುಕುಟಿಕ ಕಡಿದು ಖಂಡಿಸಿಹರದನ ಕೈಯಲ್ಲಿ ಕೊಟ್ಟು ಮಾರಿಸಿಕೊಂಡುದುಲಿಂಗವಾದ ಪರಿ ಹೆಂಗೇ?ಸಕಲ ವ್ಯಾಪಾರ ಅಳುವಿಂಗೆ ಒಳಗಾಗಿತೊಡಿಸಿ ಬರೆಸಿಕೊಂಡುದು ಮಂತ್ರವಾದ ಪರಿ ಹೇಂಗೆ?ಅಜ್ಞಾನಿ ಮೃಗಪಶುವಿನ ಸಗಣಿಯ ಸುಟ್ಟುದುವಿಭೂತಿಯಾದ ಪರಿ ಹೇಂಗೆ?ಪಂಚಭೂತಿಕದಿಂದ ಜನಿಸಿದ ವೃಕ್ಷದ ಫಲರುದ್ರಾಕ್ಷಿಯಾದ ಪರಿ ಹೇಂಗೆ?ಸಕಲ ಜೀವವೆರಸಿ ಕರಗಿದ ಅಸಿಯಜಲ ತೀರ್ಥವಾದ ಪರಿ ಹೇಂಗೆ?ಸಕಲ ಪ್ರಾಣಿಗಳ ಆಹಾರ ಹದಿನೆಂಟು ಧಾನ್ಯ ಕ್ಷುಧಾಗ್ನಿಯಲ್ಲಿಜನಿಸಿ ಪಚನವಾದುದು ಪ್ರಸಾದವಾದ ಪರಿ ಹೇಂಗೆ?

Translation

Just like when a sculptor takes a random block of stoneAnd gives it into a specific shape & formAnd sells it in the market — becomes a LingaJust like when a few words spoken in exchangeFor monetary benefits — becomes a MantraJust like when the excreta of an ignorant animalIs burnt to ashes — becomes a VibhutiJust like when a tree borne out of the five elementsBears a fruit — becomes a RudrakshaJust like when the water that is formed out of the fluidsPermeated from all beings — becomes a Teertha?Just like when the eighteen grains that satiatesThe hunger of all beings — becomes a Prasada

Original

ಅದೆಂತೆಂಡೆ;ನಿಗಮ ಶಾಸ್ತ್ರಕ್ಕೆ ಅಗಣಿತವಾದ ನಾದಬಿಂದುವಿಗೆನಿಲುಕದ ನಿತ್ಯತೃಪ್ತ ಪರಂಜ್ಯೋತಿಲಿಂಗದ ವೈಭವಕ್ಕೆಅಂಗವಾದುದು ಈ ಗುರುವಲಾ ಎಂದು ಅರಿದುಆ ಲಿಂಗದ ಚೈತನ್ಯ ಈ ಲಿಂಗವಲಾ ಎಂದು ಅರಿದುಮಾಡೂದು ತನು ಮನ ಧನ ವಂಚನೆಯಳಿದು.ಗುರುಭಕ್ತಿ ಸನ್ನಿಹಿತವಾಗಿ ಆ ಲಿಂಗದ ವದನ ಈ ಜಂಗಮವಲಾ ಎಂದರಿದು ಮಾಡೂದು ಆ ತನು ಮನ ಧನ ವಂಚನೆಯಳಿದು.ಜಂಗಮಭಕ್ತಿ ಸನ್ನಿಹಿತವಾಗಿ ಆ ಲಿಂಗದ ಕಾಯಕಾಂತಿಯ ಬೆಳಗಿನ ಐಶ್ವರಿಯಲಾ ಎಂದರಿದು ಧರಿಸೂದು ಶ್ರೀವಿಭೂತಿಯ.ಆ ಲಿಂಗದ ಶೃಂಗಾರದ ಹರನಾಭರಣವಲಾ ಎಂದರಿದು ಅಳವಡಿಸೂದು ರುದ್ರಾಕ್ಷಿಯನು.ಆ ಲಿಂಗದ ಉತ್ತುಂಗ ಕಿರಣ ಚರಣಾಂಬುಜವಲಾ ಎಂದು ಧರಿಸೂದು, ಕೊಂಬುದು ಪಾದೋದಕವನು.ಆ ಲಿಂಗದ ನಿತ್ಯಪದ ಸಂಯೋಗ ಶೇಷವತಾ ಎಂದರಿದು ಕೊಂಬುದು ಪ್ರಸಾದವನು.

Translation

Similarly;The primordial source of sound & life, immeasurableEmbodied in glory of the Eternal-Light LingaThe Guru, being the personification of LingaThe essence of the Eternal Linga within the GuruWith this feeling, I pray with my mind-body-wealthThe Ascetic, being the face of such a GuruWith this feeling, I pray with my mind-body-wealthSuch a Linga, whose radiance is enhanced multifoldBy the holy Vibhuti, with this feeling, I smear itSuch a Linga, who is adorned by ornamentsLike the Rudraksha, with this feeling, I wear itSuch a Linga, whose brilliance is akin a garlandAt its feet, I drink the water sanctified by itSuch a Linga, whose remains of its daily ablutions isLike a Prasada, with this feeling, I partake it

Original

ಇಂತಿವೆಲ್ಲವನರಿದುದಕ್ಕೆ ಸಂತೋಷವಾಗಿ ಚರಿಸುವಾತನೆ ಸದ್ಭಕ್ತ.ಆತನ ಕಾಯ ಕರಣ ಪ್ರಾಣ ಭಾವಾದಿಗಳು ಸೋಂಕಿದೆಲ್ಲವೂಲಿಂಗದ ಸೋಂಕು, ಲಿಂಗದ ಕ್ರೀ, ಲಿಂಗದ ದಾಸೋಹ.ಇಂತೀ ತ್ರಿವಿಧವ ಸವೆದು ಅಳಿದುಳಿದ ಸದ್ಭಕ್ತನ ಶ್ರೀಪಾದಕ್ಕೆನಮೋ ನಮೋ ಎಂಬೆನು ಕಾಣಾ,ಬಸವಣ್ಣಪ್ರಿಯ ನಿಃಕಳಂಕ ಸೋಮೇಶ್ವರನೆ.

Translation

By understanding this, I joyfully be your devoteePraying with my entire body-mind-life-emotionThereby touching, serving & playing with the LingaI bow in obeisance to all such peopleWho fall at your feet with devotion — to the Guru, Linga & AsceticO’ Nishkalanka Someshwara, the beloved of Basavanna

Did this poetry & its translation speak to you?

Tell Krishna what you thought →

← All translations